ಕನ್ನಡ ಪಾಠ ಶಾಲೆಗೆ ಸುಸ್ವಾಗತ

ಇಂದು ಅನಿವಾಸಿ ಕನ್ನಡಿಗರು ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿ ನೆಲಸಿದ್ದು, ವಿದೇಶದಲ್ಲಿಯೇ ಹುಟ್ಟಿ ಬೆಳೆಯುವ ನಮ್ಮ ಮಕ್ಕಳು ಪ್ರಮುಖವಾಗಿ ಆಂಗ್ಲ ಭಾಷೆಯಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಕನ್ನಡ ಭಾಷೆಯಲ್ಲಿ ಓದಲು ಅಥವಾ ಬರೆಯಲು ಅವಕಾಶವಿಲ್ಲದೆ ಮಾತೃಭಾಷೆಯಲ್ಲಿ ಅನಕ್ಷರಸ್ಥರಾಗುತ್ತಿರುವುದು ಶೋಚನೀಯ. ಆದ್ದರಿಂದ, "ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು" ಎಂದು ಸಾರಿ ವಿದೇಶದಲ್ಲಿನ ಯುವ ಪೀಳಿಗೆಗೆ ಸಾಮೂಹಿಕ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸಲು ಉದಯವಾದದ್ದೇ "ಕನ್ನಡ ಮಿತ್ರರು ಯು ಎ ಇ" ಸಂಘಟನೆ ಮತ್ತು ಅದರ ಕನ್ನಡ ಕಲಿಕಾ ವೇದಿಕೆಯೇ " ಕನ್ನಡ ಪಾಠಶಾಲೆ ದುಬೈ". ೨೦೧೪ರಲ್ಲಿ ಶಶಿಧರ್ ನಾಗರಾಜಪ್ಪ ನವರೊಂದಿಗೆ ಕೈಗೂಡಿಸಿದ ೫೦ ಜನ ಸ್ವಯಂಪ್ರೇರಿತ ಸದಸ್ಯರು ಪ್ರತಿಫಲಾಪೇಕ್ಷೆ ಇಲ್ಲದೆ ಕನ್ನಡ ಭಾಷೆ ಹಾಗು ನಾಡಿನ ಸಂಸ್ಕೃತಿಯನ್ನು ಮುಂದಿನ ನವಪೀಳಿಗೆಗೆ ವರ್ಗಾಹಿಸಲು ಸೇವೆಸಲ್ಲಿಸುತ್ತಿದ್ದಾರೆ.

ಕನ್ನಡ ಮಿತ್ರರು ಯು ಎ ಇ ತಂಡ ಗೀತೆ

ನಮ್ಮ ಪ್ರೋತ್ಸಾಹಕರು