ಮಹಾಪೋಷಕರು

ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ

ಅಧ್ಯಕ್ಷರು

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ, ಯು.ಎ.ಇ

ಪೋಷಕರು

ಶ್ರೀ ಮೋಹನ ನರಸಿಂಹಮೂರ್ತಿ

ಉಪಾಧ್ಯಕ್ಷರು

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ, ಯು.ಎ.ಇ

ಕನ್ನಡ ಮಿತ್ರರು ಯು.ಎ.ಇ ತಂಡ

ಶಶಿಧರ್ ನಾಗರಾಜಪ್ಪ

ಅಧ್ಯಕ್ಷರು

ಅಧ್ಯಕ್ಷರ ನುಡಿಗಳು

ಕನ್ನಡಿಗರು ಇಂದು ಕರ್ನಾಟಕಕ್ಕೆ ಸೀಮಿತವಾಗಿರದೆ ಜಾಗತಿಕವಾಗಿ ಅತಿವೇಗದಲ್ಲಿ ಪಸರಿಸುತ್ತಿದ್ದು , ನಮ್ಮ ನಾಡಿನ ಸಂಸ್ಕೃತಿ, ಕಲೆ ಮತ್ತು ಆಚಾರ-ವಿಚಾರಗಳನ್ನು ಜಗತ್ತಿನ ಮೂಲೆ,ಮೂಲೆಗಳಿಗೆ ಪರಿಚಯಿಸುತ್ತಿದ್ದಾರೆ. ಆದರೆ ತಮ್ಮ ಮುಂದಿನ ಪೀಳಿಗೆಗೆ ತಮ್ಮ ತಾಯ್ನಾಡಿನ ಸಂಸ್ಕಾರ ನೀಡಿ ಕನ್ನಡತನವನ್ನು ವರ್ಗಾಯಿಸುವಲ್ಲಿ ಸೋಲದಿರಲು ನಮ್ಮ ಮಕ್ಕಳಿಗೆ ಕನ್ನಡ ಭಾಷೆ ಕಲಿಸಿ , ಕನ್ನಡ ಸಾಕ್ಷರರನ್ನಾಗಿ ಮಾಡುವುದೊಂದೇ ದಾರಿ .
ಈ ಉದ್ದೇಶದಿಂದಲೇ ಹುಟ್ಟಿಕೊಂಡ “ಕನ್ನಡ ಮಿತ್ರರು ಯು.ಎ.ಇ” ಪ್ರಥಮ ಹೆಜ್ಜೆಯೇ “ಕನ್ನಡ ಪಾಠ ಶಾಲೆ ದುಬೈ”
2014 ರಲ್ಲಿ ಆರಂಭಿಸಿದ ಈ ಪ್ರಯತ್ನಕ್ಕೆ ಅತ್ಯುತ್ತಮ ಪ್ರೋತ್ಸಾಹ ,ದೊರೆತಿದ್ದು ಈ ಪ್ರಯತ್ನವನ್ನ ಕೊಲ್ಲಿ ರಾಷ್ಟ್ರಗಳ ಸಂಪೂರ್ಣ ಪ್ರಾಂತ್ಯಕ್ಕೆ ” ಆನ್ ಲೈನ್ ” ಮೂಲಕ 2023 ರ ಸುಗ್ಗಿ 9 ಆರಂಭವಾಗಲಿದೆ .
ಈ ಶಾಲೆ ಕನ್ನಡ ಸೇವೆಯ ಉದ್ದೇಶದಿಂದ ನಡೆಸುತ್ತಿದ್ದು ಸಂಪೂರ್ಣ ಉಚಿತವಾಗಿದೆ , ಶಾಲೆಗೆ ಶಿಕ್ಷಕಿಯರಾಗಿ ಸೇವೆ ಸಲ್ಲಿಸುತ್ತಿರುವ 20 ಜನರೂ ವೇತನರಹಿತವಾಗಿ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ . ಶಾಲೆಗೆ ಆಧಾರ ಸ್ತಂಭಗಳಾಗಿ 50 ಜನ ಸ್ವಯಂಸೇವಕರು ನಿಸ್ವಾರ್ಥವಾಗಿ ಶ್ರಮಿಸುತ್ತಾ ಬಂದಿರುತ್ತಾರೆ .
ನಮ್ಮ ಕನ್ನಡ ಪಾಠ ಶಾಲೆ ಪ್ರತೀ ವರ್ಷ 500 ಕ್ಕೂ ಹೆಚ್ಚು ಮಕ್ಕಳಿಗೆ ಕನ್ನಡ ಓದಲು ಮತ್ತು ಬರೆಯಲು ಕಲಿಸಿ ಕನ್ನಡ ಸಾಕ್ಷರತೆಯನ್ನು ಸಾಗರದಾಚೆಗೂ ಪಸರಿಸುತ್ತಿದ್ದು ” ಪ್ರಪಂಚದ ಅತಿ ದೊಡ್ಡ ಹೊರನಾಡ ಕನ್ನಡ ಪಾಠ ಶಾಲೆ” ಎಂಬ ಹೆಗ್ಗಳಿಕೆ ಪಡೆದಿರುವದು ಅನಿವಾಸಿ ಕನ್ನಡಿಗರ ಹೆಮ್ಮೆಯಾಗಿದೆ .
ನಮ್ಮ ಧ್ಯೇಯ ವಾಕ್ಯ “ಮಾತೃ ಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು ” ಈ ಕಾರ್ಯಕ್ಕೆ ತಮ್ಮೆಲ್ಲರ ಸಹಕಾರ , ಸಹಾಯ ಮತ್ತು ಶುಭ ಹಾರೈಕೆಯನ್ನು ಕೋರುತ್ತಾ ..
                                                                                                                                                ಶಶಿಧರ್ ನಾಗರಾಜಪ್ಪ

ರೂಪ ಶಶಿಧರ್

ಕನ್ನಡ ಪಾಠ ಶಾಲೆ ದುಬೈ ಸಂಚಾಲಕಿ ಮತ್ತು ಮುಖ್ಯ ಶಿಕ್ಷಕಿ
ಕನ್ನಡ  ಭಾಷೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಏಕೈಕ ಸಾಧನ , ದಯಮಾಡಿ   ತಮ್ಮ ಮಕ್ಕಳನ್ನು ಕನ್ನಡ ಸಾಕ್ಷರರನ್ನಾಗಿಸಿ ಎಂದು ವಿನಂತಿಸುತ್ತೇವೆ.
ನಮ್ಮ ಈ ಉಚಿತ ಶಾಲೆಗೆ ಸೇರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ಸಾಕ್ಷರರಾಗಲು ಅವಿರತ ಶ್ರಮ ವಹಿಸಿ ತರಬೇತಿ ಪಡೆದ ಶಿಕ್ಷಕಿಯರ ತಂಡವೇ ಸಿದ್ಧವಿದೆ .
ಪ್ರತಿಯೊಬ್ಬ ವಿದ್ಯಾರ್ಥಿಯ ಭಾಷಾ ಸಾಮರ್ಥ್ಯಕ್ಕೆ ಅನುಗುಣವಾಗಿ ತರಬೇತಿ ನೀಡುವ ವಿಶಿಷ್ಟ ಪಠ್ಯಕ್ರಮವನ್ನು ಅನುಸರಿಸುತ್ತಿದ್ದೇವೆ .
ಕನ್ನಡ ಪಾಠ ಶಾಲೆ ದುಬೈ ಗೆ ಮುಖ್ಯ ಸಂಚಾಲಕಿಯಾಗಿ ಕನ್ನಡ ಸೇವೆಸಲ್ಲಿಸುವ ಅವಕಾಶ ನೀಡಿದ “ಕನ್ನಡ ಮಿತ್ರರು ಯು.ಎ.ಇ ” ಯ ತಂಡಕ್ಕೆ ಧನ್ಯವಾದಗಳು .
                                                                                                                                                         ರೂಪ ಶಶಿಧರ್

ಸಿದ್ದಲಿಂಗೇಶ್ ಬಿ ಆರ್

ಉಪಾಧ್ಯಕ್ಷರು

“ಕನ್ನಡವನ್ನು ಮುಂದಿನ ಪೀಳಿಗೆಗೆ ಪಸರಿಸುವುದಕ್ಕೆ
ಕನ್ನಡ ಶಿಕ್ಷಣವೇ ಪ್ರಬಲ ಅಸ್ತ್ರ.”

ನಾಗರಾಜ್ ರಾವ್

ಖಜಾಂಚಿ

“ನನ್ನ ಸಾಧನೆ ನನ್ನ ಮಗ ಕನ್ನಡ ಸಾಕ್ಷರಸ್ತ” ಕನ್ನಡ ಕಲಿಸಿ, ಕನ್ನಡ ಬೆಳೆಸಿ ಮತ್ತು ಕನ್ನಡ ಬಳಸಿ.”

ಸುನಿಲ್ ಗವಾಸ್ಕರ್

ಪ್ರಧಾನ ಕಾರ್ಯದರ್ಶಿ

“ಶಿಕ್ಷಣವೇ ಪ್ರಬಲ ಅಸ್ತ್ರ ! ಇದು ಜಗತ್ತನ್ನೇ ಬದಲಾಯಿಸಬಹುದು.”

ಶಿವಶರಣಪ್ಪ. ಮೇಟಿ

ಸಹ ಕಾರ್ಯದರ್ಶಿ

“ಕನ್ನಡ ನನ್ನ ಕನಸು, ಕನ್ನಡ ನನ್ನ ಮನಸು, ಕನ್ನಡಿಗ ಎಂಬ ಸೊಗಸು, ನಮ್ಮಲ್ಲಿ ಕನ್ನಡ ಉಳಿಸು ಎಲ್ಲೆಲ್ಲೂ ಕನ್ನಡ ಬೆಳೆಸು.”

ಸಂಘಟನಾ ಕಾರ್ಯದರ್ಶಿಗಳು

ಚಂದ್ರಶೇಖರ್ ಸಂಕೋಳೆ
ಪುಟ್ಟರಾಜು ಗೌಡ
ಸುಧೀರ್ ಭಂಡಾರಿ
ಕೊಟ್ರೇಶ್ ಯರ್ಲಗಟ್ಟಿ
ರಾಜು ಕುಮಾರ್
ವಿನಯ್ ಕುಮಾರ್
ತೇಜಸ್ವಿ ಚಿನ್ನಸ್ವಾಮಿ
ಯುವರಾಜ್ ಮಲ್ಲೇಶ್
ಹರೀಶ್ ಕೋಡಿ
ಭಾನು ಕುಮಾರ್
ಮಹದೇವ್ ಕೊಪ್ಪಳ
ಸಂತೋಷ್ ಶ್ರೀಹರ್ಷ
ಪಾಂಡುರಂಗ ವಾಡೇಕರ್
ಜಿತೇಂದ್ರ ಕೋಟಿಯನ್
ಗಿರೀಶ್ ಕಲ್ಕು೦ದ
ಗಿರೀಶ್ ಪಟ್ವಾರಿ
ಗಿರೀಶ್ ವರೋಟೆ
ಕೊಟ್ರೇಶ್ ಕಾಟ್ರಹಳ್ಳಿ
ಸುರೇಶ ಮಾಸೂರು