” ಹೊಂಗೆಯ ಮರ ಚಂದ, ಕನ್ನಡದ ನುಡಿ ಚಂದ “

ಅಂದವಾದ, ಚಂದವಾದ , ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯನ್ನು ನಮ್ಮ ಮುಂದಿನ ಪೀಳಿಗೆಗೆ ಉಚಿತವಾಗಿ ವರ್ಗಾಯಿಸಲು ಕನ್ನಡ ಮಿತ್ರರು ನಡೆಸುತ್ತಿರುವ ಕನ್ನಡ ಪಾಠಶಾಲೆ ಸತತವಾಗಿ ಪರಿಶ್ರಮಿಸುತ್ತಿದೆ. ತಾಯ್ನಾಡಿನಿಂದ ದೂರವಿರುವ ನಮ್ಮ (UAE) ಮಕ್ಕಳು, ತಾಯಿನುಡಿಯಿಂದ ದೂರವಾಗಬಾರದು ಎಂಬುದೇ ನಮ್ಮ ಶಾಲೆಯ ಉದ್ದೇಶ.

ಅನಿವಾಸಿ ಮಕ್ಕಳಿಗೆ ಉಚಿತ ಕನ್ನಡ ಕಲಿಕೆ :

UAE ಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಮಕ್ಕಳಿಗೆ ಉಚಿತ ಕನ್ನಡ ಸಾಕ್ಷರತೆಯನ್ನು 2014 ರಿಂದ ನಡೆಸಿಕೊಂಡು ಬಂದಿರುತ್ತೇವೆ. ಮಕ್ಕಳು ಯಾವುದೇ ಶುಲ್ಕವನ್ನು ಪಾವತಿಸದೆ ನುರಿತ ಶಿಕ್ಷಕರಿಂದ ಕನ್ನಡ ಅಭ್ಯಾಸವನ್ನು ಮಾಡಬಹುದಾಗಿದೆ.

ಅತ್ಯುತ್ತಮ ಗುಣಮಟ್ಟದ ಶಿಕ್ಷಣ :

ಕನ್ನಡ ಪಾಠ ಶಾಲೆಯ ಶಿಕ್ಷಕರು ಹಲವಾರು ತರಬೇತಿಗಳನ್ನು ಪೂರ್ಣಗೊಳಿಸಿದ್ದು, ಅತ್ಯುನ್ನತ ಮತ್ತು ಸುಲಲಿತ ಕಲಿಕಾ ಮಾರ್ಗಗಳನ್ನು ಅಳವಡಿಸಿಕೊಂಡಿರುತ್ತಾರೆ. ಈ ಮೂಲಕ ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ನೀಡುವುದರಲ್ಲಿ ಯಶಸ್ವಿಯಾಗಿರುತ್ತಾರೆ.

ಮೌಲ್ಯಾಧಾರಿತ ಶಿಕ್ಷಣ :

ಕನ್ನಡ ಪಾಠ ಶಾಲೆಯಲ್ಲಿ ಮಕ್ಕಳ ಕಲಿಕೆಯನ್ನು ಕೇವಲ ಭಾಷಾ ಕಲಿಕೆಗೆ ಮೀಸಲಿಡದೆ ಜೀವನದ ಮೌಲ್ಯಗಳನ್ನು ಪದ್ಯ, ಗದ್ಯ, ನೀತಿ ಕಥೆಗಳ ಮುಖೇನ ಮಕ್ಕಳಿಗೆ ತಿಳಿಸಲಾಗುತ್ತಿದೆ.

ಕಲೆ ಸಾಹಿತ್ಯ ಮತ್ತು ಸಂಸ್ಕೃತಿ :

ಕನ್ನಡ ಪಾಠಶಾಲೆಯು ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಹಲವಾರು ಪ್ರಾಚೀನ ಕಲೆಗಳನ್ನು ಸಾಹಿತ್ಯವನ್ನು ಮತ್ತು ಕರುನಾಡಿನ ಸಂಸ್ಕೃತಿಯನ್ನು , ಮಹತ್ವದ ಸಹಿತ ಮಕ್ಕಳಿಗೆ ಹೇಳಿಕೊಡುತಿದ್ದಾರೆ.

ಮಾನ್ಯತೆ :

ಕನ್ನಡ ಪಾಠ ಶಾಲೆಯಲ್ಲಿ ಕನ್ನಡ ಕಲಿಕೆಯನ್ನು ಪೂರ್ಣಗೊಳಿಸಿದ ಮಕ್ಕಳಿಗೆ ಪರೀಕ್ಷೆಗಳನ್ನು ನಡೆಸಿ, ಫಲಿತಾಂಶಗಳನ್ನು ಪ್ರಕಟಿಸಿ , ಪ್ರಮಾಣ ಪತ್ರವನ್ನು, ಪದಕವನ್ನು ವಿತರಿಸಿ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ.