ಕನ್ನಡ ಮಿತ್ರರು ಯು ಎ ಇ ಸಂಘಟನೆಯ ವತಿಯಿಂದ ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ‘ಸ್ಮಾರ್ಟ್ ಕ್ಲಾಸ್’ ಚತುರ ಶಾಲಾ ಉಪಕರಣಗಳನ್ನು ದೇಣಿಗೆಯಾಗಿ ನೀಡಿ, ಕನ್ನಡ ಮಾಧ್ಯಮದ ಗ್ರಾಮಾಂತರ ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗುತ್ತಿದೆ.

ಲ್ಯಾಪ್ ಟಾಪ್, ಡಿಜಿಟಲ್ ಪ್ರೊಜೆಕ್ಟರ್ ಮತ್ತು ಕಲರ್ ಪ್ರಿಂಟರ್ ಗೆ ತಗಲುವ ವೆಚ್ಚವನ್ನು ಸಂಘಟನೆಯ ಎಲ್ಲಾ ಸದಸ್ಯರಿಂದ ಸಹಾಯ ಪಡೆದು ಭರಿಸಲಾಗುತ್ತಿದೆ. ಈಗಾಗಲೇ ಐದು ಶಾಲೆಗಳಲ್ಲಿ ಚತುರ ಶಾಲಾ ಯೋಜನೆ ಅನುಷ್ಠಾನಗೊಳಿಸಲಾಗಿದೆ.

ಚತುರ ಶಾಲಾ ಯೋಜನೆಯಡಿ ೨೦೨೩ರಲ್ಲಿ ಕೆಳಕಂಡ ಈ ಹದಿಮೂರು ಶಾಲೆಗಳಿಗೆ ‘ಸ್ಮಾರ್ಟ್ ಕ್ಲಾಸ್’ ನೀಡಲಾಯಿತು:

                                 1. ಹೊನುಗುಂಟ – ಗುಲ್ಬರ್ಗ
                                 2. ನಂದಿತಾವರೆ – ದಾವಣಗೆರೆ
                                 3. ಕಲಕುಂದ – ಮೈಸೂರು
                                 4. ಭರಮಸಾಗರ – ಚಿತ್ರದುರ್ಗ
                                 5. ಚಿಗಟೇರಿ – ಬಳ್ಳಾರಿ
                                 6. ಪಡುವನ್ನೂರು – ದಕ್ಷಿಣ ಕನ್ನಡ

7. ಅರಕಲ್ವಾಡಿ – ಚಾಮರಾಜನಗರ
8. ಮಕಾಪುರ – ರಾಯಚೂರು
9. ದೊಡ್ಡೇರಿ – ದಾವಣಗೆರೆ
10. ಅಗಸನಪುರ – ಮಂಡ್ಯ
11. ನಂಜರಾಯ ಪಟ್ಟಣ – ಕೊಡಗು
12. ಬೋರಳ- ಬೀದರ್
13. ಕುರುಬರದೊಡ್ಡಿ- ರಾಮನಗರ

 

ಚತುರ ಶಾಲಾ ಯೋಜನೆಯಡಿ ಸ್ಮಾರ್ಟ್ ಕ್ಲಾಸ್ ಉಪಕರಣಗಳನ್ನು ದೇಣಿಗೆಯಾಗಿ ನೀಡಿದ ಸಾರ್ಥಕ ಕ್ಷಣಗಳು